ಅಮೃತ ಮಂಗಳಂ
	ಮದರಾಸು ರಾಜ್ಯದ ಚೆಂಗಲ್‍ಪೇಟೆ ಜಿಲ್ಲೆಯಲ್ಲಿರುವ ಈ ಗ್ರಾಮದಲ್ಲಿ ಕಬ್ಬಿಣಯುಗಕ್ಕೆ ಸಂಬಂಧಿಸಿದ ಸಮಾಧಿಗಳಿವೆ. ಮೊದಲು ಮೃತನ ದೇಹವನ್ನು ಕೆಲವು ದಿನಗಳು ಎಲ್ಲೊ ಬಿಟ್ಟಿದ್ದು, ಚರ್ಮ ಮಾಂಸಾದಿ ಭಾಗಗಳು ನಶಿಸಿದಮೇಲೆ, ಮುಖ್ಯ ಅಸ್ಥಿಗಳನ್ನು ಸಂಗ್ರಹಿಸಿ, ಚೂಪು ತಳದ ಗುಡಾಣಗಳಲ್ಲಿಟ್ಟು, ಹಳ್ಳದಲ್ಲಿ ಹೂಳಿ, ಮೇಲೆ ಬೆಣಚುಕಲ್ಲು ಮತ್ತು ಮಣ್ಣಿನ ಗುಡ್ಡೆಗಳನ್ನು ನಿರ್ಮಿಸುತ್ತಿದ್ದ, ಕ್ರಿಸ್ತ ಪೂರ್ವದ ದಕ್ಷಿಣಭಾರತದ ಶವಸಂಸ್ಕಾರ ಪದ್ಧತಿಯ ಬಗ್ಗೆ ಈ ಸಮಾಧಿಗಳು ಮಾಹಿತಿಯನ್ನು ಒದಗಿಸುತ್ತವೆ.

(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ